ಸಚಿವರ ಸಂಕ್ಷಿಪ್ತ ವ್ಯಕ್ತಿಚಿತ್ರ
ಶ್ರೀ ಬಿ. ಸಿ. ನಾಗೇಶ್ ಅವರು 2021ರ ಆಗಸ್ಟ್ 4ರಂದು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ
ಹಾಗೂ ಸಕಾಲ ಸಚಿವರಾಗಿ ಪದಗ್ರಹಣ ಮಾಡಿದರು.ಕರ್ನಾಟಕದ ‘ಕಲ್ಪತರು ನಾಡು’ ಎಂದು ಕರೆಯಲ್ಪಡುವ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನವರಾದ ಬಿ.ಸಿ. ನಾಗೇಶ್ ಅವರು, 2008 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಬೆಂಗಳೂರಿನ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (ಬಿ.ಇ) ಪದವೀಧರರಾಗಿರುವ ಬಿ.ಸಿ ನಾಗೇಶ್ ಅವರು ಕಾಲೇಜು ದಿನಗಳಲ್ಲೇ ಜನ ಸೇವೆ ಮಾಡುವ ಉದ್ದೇಶದಿಂದ ಸಾರ್ವಜನಿಕ ಜೀವನಕ್ಕೆ ಧುಮುಕಿದರು.
ಸ್ವಾತಂತ್ರ್ಯ ಭಾರತದ ಕರಾಳ ಘಟನೆಗಳಲ್ಲಿ ಒಂದಾದ ‘ತುರ್ತು ಪರಿಸ್ಥಿತಿ’ ಹೇರಿಕೆ ವಿರುದ್ಧ ಹೋರಾಟ ನಡೆಸಿದ ಬಿ.ಸಿ. ನಾಗೇಶ್ ಅವರು ಸೆರೆಮನೆ ವಾಸ ಅನುಭವಿಸಿದ್ದಾರೆ.
ಬಿ.ಸಿ. ನಾಗೇಶ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಪೂರ್ಣಾವಧಿ ಕಾರ್ಯಕರ್ತರಾಗಿ, ಎಬಿವಿಪಿ ಬೆಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್¬ಎಸ್-ಎಸ್) ಸ್ವಯಂ ಸೇವಕರಾಗಿ ಬಿ.ಸಿ. ನಾಗೇಶ್ ಅವರು ಕಾರ್ಯನಿರ್ವಹಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.ತುಮಕೂರು ಜಿಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ನಿಭಾಯಿಸಿರುವ ಬಿ.ಸಿ ನಾಗೇಶ್ ಅವರು ವರದ ಸೇವಾ ಪ್ರತಿಷ್ಠಾನ ಸಂಸ್ಥೆ ಅರಕಲಗೂಡಿನ ವಿಶೇಷಚೇತನರ ಶಾಲೆಯಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮೊದಲಿನಿಂದಲೂ ಸರಳ ಜೀವನ ಶೈಲಿಯನ್ನು ಮೈಗೂಡಿಸಿಕೊಂಡಿರುವ ಬಿ.ಸಿ ನಾಗೇಶ್ ಅವರು, ಜನರ ಕೈಗೆ ಸುಲಭವಾಗಿ ಸಿಗುವ ವ್ಯಕ್ತಿಯಾಗಿದ್ದಾರೆ.
ಸಚಿವರಾಗಿ ಪದಗ್ರಹಣ ಮಾಡಿದ ಬಳಿಕ ತರಗತಿಗಳ ಪುನಾರಂಭದ ಕುರಿತು ಯೋಚಿಸಿದ ಸಚಿವರು ಕ್ಷಿಪ್ರವಾಗಿ ಕೆಲಸ ಆರಂಭಿಸಿದರು.
ಶಾಲಾ-ಕಾಲೇಜುಗಳ ಆರಂಭ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೇ, ಬೇಡವೇ ಎಂದು ಪಾಲಕರು, ಮಕ್ಕಳು, ವೈದ್ಯಕೀಯ ವಲಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಆತಂಕ, ಗೊಂದಲಗಳು ಇದ್ದವು. ಆದರೆ, ಶಾಲೆ-ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ, ಒಂದೂವರೆ ವರ್ಷದಿಂದ ಭೌತಿಕ ತರಗತಿಗಳಿಲ್ಲದೇ ಮಕ್ಕಳ ಕಲಿಕೆಯಲ್ಲಿ ಹಿನ್ನೆಡೆಯಾಗಿತ್ತು.
...
Minister profile
Shri. B.C. Nagesh is a Cabinet Minister in the Government headed by Hon’ble Chief Minister Shri. Basavaraja Bommai. He is a Hon'ble Minister for School Education & Literacy and Sakala. He was sworn in as a Ministers on 4/08/2021
Shri. B.C. Nagesh is an elected Member of Legislative Assembly (MLA) from Tiptur Assembly Constituency of Tumkur District of Karnataka. He is a two time MLA from Bharatiya Janata Party (BJP) from Tiptur Assembly Constituency ( 2008 as well as in 2018).
He has graduated in Electrical Engineering from BMS College of Engineering, Bangalore. After graduation, he has associated himself fully with social activities serving people of all walks of society with utmost sincerity and honesty by practicing value based politics
He was a full-time activist of the Akhila Bharathiya Vidyarthi Parishad (ABVP) and later got elevated as organizing Secretary of ABVP, Bangalore Division.
He is also a Member of Rastriya Swayam Sevak Sangh with a mission to serve poor and needy by introducing several social welfare measures in the field of Education.
He has also introduced much needed innovativeness to bring about Transparency in the system. During Emergency, in the post independent era of India, he was jailed for taking part in fighting against the imposition of the Emergency in india.
He served as Vice President of the Yuva Morcha of the Bharatiya Janata Party and he was General Secretary of BJP in Tumkur District. He worked as volunteer in a School for physically challenged children namely ‘Varada seva Foundation’ at Arakalugud Taluk of Hassan District for a period of 5 years.
...

ಕೋವಿಡ್-19 ಮೂರನೇ ಅಲೆಯ ಆತಂಕದ ನಡುವೆ ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳ ಆರಂಭದ ಕುರಿತು ಕೋವಿಡ್-19 ತಜ್ಞರು, ಸಲಹಾ ಸಮಿತಿ, ಮಕ್ಕಳ ತಜ್ಞರು, ಶಿಕ್ಷಣ ತಜ್ಞರ ಸಲಹೆ ಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚೆ ನಡೆಸಿ ಶಾಲಾ-ಕಾಲೇಜುಗಳ ಆರಂಭದ ನಿರ್ಧಾರ ತೆಗೆದುಕೊಂಡರು.
ಕೋವಿಡ್ ದೃಢ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಆರಂಭದಲ್ಲಿ ತರಗತಿ ಆರಂಭಿಸಿ ನಂತರ ಹಂತ ಹಂತವಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ತರಗತಿ ಆರಂಭಿಸಲಾಯಿತು.
ಶಾಲೆಗಳನ್ನು ಆರಂಭಿಸುವ ಜೊತೆಗೆ ಮಕ್ಕಳು ಓದು-ಬರಹದ ಕಡೆ ಗಮನ ಹರಿಸಲು ಅಗತ್ಯವಾದ ಮಧ್ಯಾಹ್ನದ ಬಿಸಿಯೂಟ ಕೂಡ ಆರಂಭಿಸಲಾಗಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾರವರ್ಧಿತ ಅಕ್ಕಿ ಒದಗಿಸಲಾಗುತ್ತಿದೆ.ಭೌತಿಕ ತರಗತಿಗಳು ಆರಂಭಿಸುತ್ತಿದ್ದಂತೆ ಎದುರಾದ ಶಿಕ್ಷಕರ ಕೊರತೆಯನ್ನು ನೀಗಿಸಲು ಪ್ರಾಥಮಿಕ ಶಾಲೆಗಳಲ್ಲಿ 18 ಸಾವಿರ, ಪ್ರೌಢ ಶಾಲೆಗಳಿಗೆ 5,078 ಹಾಗೂ ಪಿಯು ಕಾಲೇಜುಗಳಿಗೆ 3,552 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಯಿತು.
ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕದ ಮೂಲಕ ಚಾಲನೆ ನೀಡಲಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಬದಲಾವಣೆ ತರಲಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ಪೂರ್ವ ಬಾಲ್ಯಾವಸ್ಥೆಯಿಂದ 12ನೇ ತರಗತಿವರೆಗೆ ಅನುಷ್ಠಾನಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಎನ್ಇಪಿ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ಸಿದ್ದಗೊಳಿಸಲು ವಿವಿಧ ಕಾರ್ಯಾಗಾರ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಸಾರ ರಾಜ್ಯದ ಅಗತ್ಯತೆಗೆ ತಕ್ಕಂತೆ ಪಠ್ಯಕ್ರಮ ಸಿದ್ದಗೊಳಿಸಲು 26 ಸಮಿತಿಗಳನ್ನು ರಚಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಾಗಿ ಶಿಸ್ತುಬದ್ಧ ರೀತಿಯಲ್ಲಿ ಎನ್¬ಇಪಿ ಅನುಷ್ಠಾನಕ್ಕೆ ಸಚಿವರಾದ ಬಿ.ಸಿ ನಾಗೇಶ್ ಅವರು ಕ್ರಮ ಕೈಗೊಂಡಿದ್ದಾರೆ.
Shri. B.C. Nagesh leads a simple lifestyle from the beginning of his political career and even now continues do so. He is an easily approachable to common man and addresses problems within a reasonable Time. After assuming the charge as Primary & Secondary Education and Sakala, he swung into action from the day one to give much needed impetus to start Re-opening of Schools and Pre University colleges across the State, which were temporarily shut down due to Covid-19 pandemic. On the advice of the Covid-19 Technical Expert Committee, Hon’ble Minister Hon’ble Chief Minister Shri. Basavaraja Bommai, Hon’ble Minister took everybody into confidence, held series of meeting with Medical Experts, General public, parents, children, teachers on the major issue of Re-opening of schools & Colleges. He allied all fears of threat of Covid-19 pandemic for Re-opening of Schools in the Minds of parents. He took a bold aggressive step to open first Pre-University colleges in the State of Karnataka in phased manner followed by Re-opening of schools all across the state. Due to wise and mature decision taken by the Hon’ble Minister, Physical classes which had been discontinued for more than 18 months were started with all Covid-19 safety precautions adhering to Standard Operating Procedures (SOP’s) to prevent recurrence of pandemic. In addition to starting the physical classes, mid-day meal program was also resumed. Under the able leadership of Hon’ble Minister, the mid-day meal program started once again. Nutritious meals are being served to the children across the state so that they could focus of Learning in schools. As the physical classes were resumed and commenced, addressing issue of shortage of teachers posed a big challenge. It was under the sustained efforts of the hon’ble Minister, steps have been take to Temporarily recruit of 18,000 primary school teachers, 5,078 high school teachers and 2065 Pre university lecturers as guest teachers till the permanent teachers are appointed. Another far reaching impact in the Education Department is Process of Teachers Transfer. For this, the Modified Teacher friendly Teacher’s Transfer Amendment act & Rules were introduced.Due to the untiring efforts of hon’ble Minister, the process of teacher’s transfer is going on smoothly. A Task Force is formed under Shri. Madan Gopal, a retired IAS Officer, for the implementation of the National Education Policy - 2020. The Task Force has been assigned a job of providing necessary guidance to the Government on issues related to implementation of NEP 2020 in school education. Various workshops and programs are being organized to prepare all stake holders which includes Parents, General Public Teachers and field instructors as they play a significant role in the implementation of NEP-2020. For the drafting of Curriculum Framework, different position papers need to be developed. In this connection, 26 various committees have been constituted to develop position papers on different themes. Steps are being taken to implement the NEP-2020 in a disciplined manner for significant improvement in the education system.